ರಾಜೀವ್ ಗಾಂಧಿ (೧೯೮೪-೧೯೮೯) ಭಾರತದ ೬ ನೇ ಪ್ರಧಾನಿಯಾಗಿದ್ದರು. ಇವರು ಭಾರತದ ಪ್ರಧಾನಿ 'ಶ್ರೀಮತಿ ಇಂದಿರಾ ಗಾಂಧಿ', ಹಾಗೂ 'ಫಿರೋಝ್ ಗಾಂಧಿ' ದಂಪತಿಗಳ ಮೊದಲ ಮಗ. == ಜನನ, ಜೀವನ == ರಾಜೀವ್ ಗಾಂಧಿ (ಜನನ : ಆಗಸ್ಟ್ ೨೦, ೧೯೪೪) ತಂದೆ ಫಿರೋಝ್ ಗಾಂಧಿ. ಇವರು ಇಟಲಿಯ ಮೂಲದವರಾದ ಸೋನಿಯ ಮೈನೊ ಅವರನ್ನು ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು- ರಾಹುಲ್ ಮತ್ತು ಪ್ರಿಯಾಂಕ. ೧೯೬೨ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ನಲ್ಲಿ ಇಂಜಿನೀಯರಿಂಗ್ ಮಾಡಲು ಹೋದರಾದರೂ ೧೯೬೫ ರವರೆಗೂ ಅಲ್ಲೇ ಇದ್ದು ಪದವಿ ಪಡೆಯದೇ ವಾಪಾಸಾದರು. ಅವರು ಮೊದ ಮೊದಲು ರಾಜಕೀಯವನ್ನು ಇಷ್ಟ ಪಡುತ್ತಿರಲಿಲ್ಲ. ಪೈಲೆಟ್ ಆಗಬೇಕೆಂಬುದು ಅವರ ಬಹುದಿನದ ಬಯಕೆಯಾಗಿತ್ತು. ಆ ಆಸೆ ಅವರಿಗೆ ಈಡೇರಲಿಲ್ಲ.ತಾಯಿಯ ಆಡಳಿತದಲ್ಲಿ ನಿಗಾ ವಹಿಸಿದ್ದ ಸಹೋದರ ಸಂಜಯ ಗಾಂಧಿ ಮರಣಾನಂತರ, ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದ ಇವರು ಸಂಜಯ್ ಗಾಂಧಿಯವರ ಕ್ಷೇತ್ರ ಅಮೇಥಿಯಿಂದ ೨ ಲಕ್ಷ ಮತಗಳ ಅಂತರದಲ್ಲಿ ಶರದ್ ಪವಾರ್ ವಿರುದ್ದ ಆರಿಸಿ ಬಂದರು. == ರಾಜಕೀಯ == ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (೪೦ ನೇ ವಯಸ್ಸಿನಲ್ಲಿ ) ಪ್ರಧಾನಿಯಾಗಿದ್ದರು. ೧೯೮೪ ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (೪೦೪ ಸ್ಥಾನಗಳು) ಗೆದ್ದಿದ್ದರು. ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟರು. ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು. == ನಿಧನ == ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು. ಅವರ ಸುಂದರ ಕಾಯ ಬಾಂಬ್ ಧಾಳಿಯಿಂದ ಚೂರು ಚೂರಾಗಿತ್ತು. == ಹೆಚ್ಚಿನ ಓದಿಗೆ - ಹೊರ ಸಂಪರ್ಕ == ತಮಿಳು ರಾಜಕಾರಣದ ಕಾರ್ಯತಂತ್ರ == ಉಲ್ಲೇಖಗಳು == ' --3 'ರಾಜೀವ್ ಗಾಂಧಿ'-ಭಾಗ-೩ ಯು ಟ್ಯೂಬ್